ಫೆಬ್ರವರಿ 18, 2021
ಇಂದು, ನಮ್ಮ ಸೇವಾ ನಿಯಮಗಳು ಮತ್ತು ಗೌಪ್ಯತಾ ನೀತಿಯನ್ನು ಪರಿಶೀಲಿಸುವಂತೆ ನಾವು WhatsApp ಬಳಕೆದಾರರನ್ನು ಹೇಗೆ ಆಗ್ರಹಿಸುತ್ತೇವೆ ಎಂಬುದರ ಕುರಿತಂತೆ ನಾವು ಅಪ್‍ಡೇಟ್ ಆದ ಯೋಜನೆಗಳನ್ನು ಹಂಚಿಕೊಳ್ಳುತ್ತಿದ್ದೇವೆ. ಈ ಹಿಂದೆ ಈ ಅಪ್‌ಡೇಟ್‌ನ ಕುರಿತಂತೆ ಸಾಕಷ್ಟು ತಪ್ಪು ಮಾಹಿತಿಗಳು ಹರಿದಾಡಿರುವುದನ್ನು ನಾವು ಎದುರಿಸಿದ್ದೇವೆ ಮತ್ತು ಎಲ್ಲ ರೀತಿಯ ಗೊಂದಲಗಳನ್ನು ನಿವಾರಿಸಲು ನಾವು ಅವಿರತವಾಗಿ ಶ್ರಮಿಸುತ್ತಿದ್ದೇವೆ.
WhatsApp ನಲ್ಲಿ ಬ್ಯುಸಿನೆಸ್‌ನೊಂದಿಗೆ ಚಾಟ್ ಮಾಡಲು ಅಥವಾ ಶಾಪಿಂಗ್ ಮಾಡಲು ಸಂಪೂರ್ಣವಾಗಿ ಐಚ್ಚಿಕವಾದ ಹೊಸ ವಿಧಾನಗಳನ್ನು ನಾವು ರಚಿಸುತ್ತಿದ್ದೇವೆ ಎಂಬುದನ್ನು ನಾವು ನೆನಪಿಸಲು ಬಯಸುತ್ತೇವೆ. ವೈಯಕ್ತಿಕ ಮೆಸೇಜ್‌ಗಳನ್ನು ಯಾವಾಗಲೂ ಕೊನೆಯಿಂದ-ಕೊನೆಯವರೆಗೆ ಎನ್‌ಕ್ರಿಪ್ಟ್ ಮಾಡಲಾಗಿರುತ್ತದೆ. ಹೀಗಾಗಿ WhatsApp ಅವುಗಳನ್ನು ಓದಲು ಅಥವಾ ಕೇಳಲು ಸಾಧ್ಯವಿಲ್ಲ.
ನಾವು ಇಲ್ಲಿ ಏನೆಲ್ಲಾ ಇನ್ನೂ ಚೆನ್ನಾಗಿ ಮಾಡಬಹುದಿತ್ತೆಂಬುದನ್ನು ಆತ್ಮವಿಮರ್ಶೆ ಮಾಡಿಕೊಂಡಿದ್ದೇವೆ. ಕೊನೆಯಿಂದ-ಕೊನೆಯವರೆಗಿನ ಎನ್‌ಕ್ರಿಪ್ಷನ್ ಮಾಡುವ ನಮ್ಮ ನಿರ್ಧಾರಕ್ಕೆ ನಮ್ಮ ಬದ್ಧತೆಯನ್ನು ಹಾಗೂ ಜನರ ಗೌಪ್ಯತೆ ಮತ್ತು ಸುರಕ್ಷತೆಗಳನ್ನು ರಕ್ಷಿಸಲು ನಾವು ಬದ್ಧರಾಗಿದ್ದೇವೆ ಎಂಬುದನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕೆಂದು ನಾವು ಇಚ್ಚಿಸುತ್ತೇವೆ. ಈಗ ನಾವು, ನಮ್ಮ ಮೌಲ್ಯಗಳು ಮತ್ತು ಅಪ್‌ಡೇಟ್‌ಗಳನ್ನು WhatsApp ನೊಳಗೆ ನೇರವಾಗಿ ಶೇರ್ ಮಾಡಿಕೊಳ್ಳಲು ನಮ್ಮ ಸ್ಟೇಟಸ್ ಫೀಚರ್ ಅನ್ನು ಬಳಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ನಮ್ಮ ಧ್ವನಿಯನ್ನು ಇನ್ನಷ್ಟು ಸ್ಪಷ್ಟಪಡಿಸಲು ನಾವು ಇನ್ನೂ ಹೆಚ್ಚು ಶ್ರಮಿಸಲಿದ್ದೇವೆ.
ಮುಂಬರುವ ವಾರಗಳಲ್ಲಿ, ಹೆಚ್ಚಿನ ಮಾಹಿತಿಯನ್ನು ಒದಗಿಸುವಂತಹ ಬ್ಯಾನರ್ ಅನ್ನು ನಾವು WhatsApp ನಲ್ಲಿ ಪ್ರದರ್ಶಿಸುತ್ತೇವೆ. ಇದನ್ನು ಜನರು ತಮ್ಮ ಅನುಕೂಲದ ಸಮಯದಲ್ಲಿ ಓದಿಕೊಳ್ಳಬಹುದು. ನಮಗೆ ಕೇಳಿಬರುವ ಕಳವಳಗಳಿಗೆ ಪರಿಹಾರ ಒದಗಿಸಲು ಮತ್ತು ಈ ಕುರಿತು ಪ್ರಯತ್ನಿಸಲು ಹೆಚ್ಚಿನ ಮಾಹಿತಿಯನ್ನು ಕೂಡ ಸೇರಿಸಿದ್ದೇವೆ. ಕ್ರಮೇಣ, WhatsApp ಬಳಕೆಯನ್ನು ಮುಂದುವರಿಸಲು ಈ ಅಪ್‌ಡೇಟ್‌ಗಳನ್ನು ಪರಿಶೀಲಿಸುವಂತೆ ಮತ್ತು ಸ್ವೀಕರಿಸುವಂತೆ ಜನರಿಗೆ ನೆನಪಿಸುವ ಕೆಲಸವನ್ನು ನಾವು ಪ್ರಾರಂಭಿಸುತ್ತೇವೆ.
ನಾವು WhatsApp ಅನ್ನು ಉಚಿತವಾಗಿ ಹೇಗೆ ಒದಗಿಸುತ್ತಿದ್ದೇವೆ ಎಂಬುದನ್ನು ಜನ ಅರಿತಿರುವುದು ಕೂಡ ಮುಖ್ಯವೆಂದು ನಾವು ಭಾವಿಸುತ್ತೇವೆ. ಪ್ರತಿದಿನ ಲಕ್ಷಾಂತರ ಜನರು ಬ್ಯುಸಿನೆಸ್‌ನೊಂದಿಗೆ WhatsApp ಚಾಟ್ ಅನ್ನು ಪ್ರಾರಂಭಿಸುತ್ತಾರೆ. ಏಕೆಂದರೆ ಫೋನ್ ಕಾಲ್ ಮಾಡುವುದು ಅಥವಾ ಇಮೇಲ್‌ಗಳ ಮೂಲಕ ಸಂವಹನ ನಡೆಸುವುದಕ್ಕಿಂತ ಚಾಟ್ ಮಾಡುವುದು ಸುಲಭ. WhatsApp ನಲ್ಲಿ ಗ್ರಾಹಕ ಸೇವೆಯನ್ನು ಒದಗಿಸಲು ನಾವು ಬ್ಯುಸಿನೆಸ್‌ಗಳಿಗೆ ಶುಲ್ಕ ವಿಧಿಸುತ್ತೇವೆಯೇ ಹೊರತು ಜನರಿಗೆ ಶುಲ್ಕ ವಿಧಿಸುವುದಿಲ್ಲ. ಬ್ಯುಸಿನೆಸ್‌ಗಳು ಆಪ್‌ಗಳ ಒಳಗೇ ತಮ್ಮ ಇನ್ವೆಂಟರಿಗಳನ್ನು ನಿರ್ವಹಿಸಲು ಅನುಕೂಲವಾಗುವಂತೆ, ಕೆಲವು ಶಾಪಿಂಗ್ ಫೀಚರ್‌ಗಳು Facebook ಅನ್ನು ಒಳಗೊಂಡಿರುತ್ತವೆ. ನಾವು ಹೆಚ್ಚಿನ ಮಾಹಿತಿಯನ್ನು ನೇರವಾಗಿ WhatsApp ನಲ್ಲಿಯೇ ಪ್ರದರ್ಶಿಸುವುದರಿಂದ ಬ್ಯುಸಿನೆಸ್‍ಗಳ ಜೊತೆಗೆ ಸಂವಹನ ನಡೆಸಬೇಕೆ ಅಥವಾ ಬೇಡವೇ ಎಂದು ಜನರು ನಿರ್ಧಾರ ಮಾಡಬಹುದು.
ಇದೇ ವೇಳೆ, ಇತರ ಆ್ಯಪ್‌ಗಳಲ್ಲಿ ಯಾವ ಆಫರ್‌ಗಳಿವೆ ಎಂಬುದನ್ನು ಕೆಲವು ಜನರು ಪರಿಶೀಲಿಸಬಹುದು ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ನಮ್ಮ ಕೆಲವು ಸ್ಪರ್ಧಿಗಳು ಜನರ ಮೆಸೇಜ್‌ಗಳು ಕಾಣಿಸುತ್ತಿಲ್ಲ ಎಂದು ಹೇಳಿ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುವುದನ್ನು ನಾವು ಗಮನಿಸಿದ್ದೇವೆ. ಯಾವುದೇ ಆ್ಯಪ್ ಡೀಫಾಲ್ಟ್ ಆಗಿ ಕೊನೆಯಿಂದ ಕೊನೆಯವರೆಗಿನ ಎನ್‌ಕ್ರಿಪ್ಷನ್ ಅನ್ನು ಒದಗಿಸುತ್ತಿಲ್ಲ ಎಂದಾದರೆ ಅವರು ನಿಮ್ಮ ಮೆಸೇಜ್‌ಗಳನ್ನು ಓದಲು ಸಾಧ್ಯವಿದೆ ಎಂದೇ ಅರ್ಥ. WhatsApp ಗಿಂತ ಕಡಿಮೆ ಮಾಹಿತಿಯನ್ನು ಸಂಗ್ರಹಿಸುವುದರಿಂದ ತಾವು ಉತ್ತಮ ಎಂದು ಇತರ ಆ್ಯಪ್‌ಗಳು ಹೇಳಿಕೊಳ್ಳುತ್ತವೆ. ಜನರು ವಿಶ್ವಾಸಾರ್ಹವೂ ಮತ್ತು ಸುರಕ್ಷಿತವೂ ಆದ ಆ್ಯಪ್‌ಗಳನ್ನು ಬಯಸುತ್ತಾರೆ ಎಂದು ನಾವು ಭಾವಿಸುತ್ತೇವೆ. ಅದಕ್ಕಾಗಿ WhatsApp ಕೆಲವು ಸೀಮಿತ ಡೇಟಾವನ್ನು ಹೊಂದಬೇಕಾಗಬಹುದು. ನಾವು ತೆಗೆದುಕೊಳ್ಳುವ ನಿರ್ಧಾರಗಳ ಬಗ್ಗೆ ಚಿಂತನಶೀಲರಾಗಿರಲು ನಾವು ಪ್ರಯತ್ನಿಸುತ್ತೇವೆ ಮತ್ತು ಈ ಜವಾಬ್ದಾರಿಗಳನ್ನು ಕನಿಷ್ಠ ಮಾಹಿತಿಯೊಂದಿಗೆ ಪೂರೈಸುವಂತಹ ಹೊಸ ವಿಧಾನಗಳನ್ನು ನಾವು ಅಭಿವೃದ್ಧಿಪಡಿಸುವತ್ತ ಮುಂದುವರಿಯುತ್ತೇವೆ.
ಕಳವಳಗಳನ್ನು ಪರಿಹರಿಸಲು ಮತ್ತು ಯಾವುದೇ ಪ್ರಶ್ನೆಗಳಿಗೆ ಉತ್ತರಿಸಲು ಲಭ್ಯವಾಗುವಂತೆ ಸಹಾಯ ಮಾಡಿದ ಪ್ರತಿಯೊಬ್ಬರಿಗೂ ನಾವು ಕೃತಜ್ಞರು. 2021 ರಲ್ಲಿನ ಯೋಜನೆಗಳನ್ನು ನಾವು ನಿಲ್ಲಿಸಿಲ್ಲ ಮತ್ತು ಮುಂಬರುವ ವಾರಗಳಲ್ಲಿ ಮತ್ತು ತಿಂಗಳುಗಳಲ್ಲಿ ಇವುಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನಾವು ಕಾತರದಿಂದಿದ್ದೇವೆ.
ಫೆಬ್ರವರಿ 18, 2021