ಕಂಟೆಂಟ್‌ಗೆ ಸ್ಕಿಪ್ ಮಾಡಿ
  • ಮುಖಪುಟ
    • ಖಾಸಗಿಯಾಗಿ ಮೆಸೇಜ್ ಕಳುಹಿಸಿಸಂಪರ್ಕದಲ್ಲಿರಿಸಮುದಾಯವನ್ನು ನಿರ್ಮಿಸಿನಿಮ್ಮ ಬಗ್ಗೆ ನೀವೇ ವ್ಯಕ್ತಪಡಿಸಿವ್ಯವಹಾರಕ್ಕಾಗಿ WhatsApp
  • ಗೌಪ್ಯತೆ
  • ಸಹಾಯ ಕೇಂದ್ರ
  • ಬ್ಲಾಗ್
ಡೌನ್‌ಲೋಡ್ ಮಾಡಿ
ಸೇವಾ ನಿಯಮಗಳು2023 © WhatsApp LLC
WhatsApp ಮುಖ್ಯ ಪುಟWhatsApp ಮುಖ್ಯ ಪುಟ
    • ಖಾಸಗಿಯಾಗಿ ಮೆಸೇಜ್ ಕಳುಹಿಸಿ

      ಕೊನೆಯಿಂದ ಕೊನೆಯವರೆಗೆ ಎನ್‌ಕ್ರಿಪ್ಷನ್ ಮತ್ತು ಗೌಪ್ಯತೆ ನಿಯಂತ್ರಣಗಳು.

    • ಸಂಪರ್ಕದಲ್ಲಿರಿ

      ನಿಮ್ಮ ಗ್ರಾಹಕರನ್ನು ಜಾಗತಿಕವಾಗಿ ತಲುಪಿ.

    • ಸಮುದಾಯವನ್ನು ನಿರ್ಮಿಸಿ

      ಗ್ರೂಪ್ ಸಂಭಾಷಣೆಗಳನ್ನು ಸರಳಗೊಳಿಸಲಾಗಿದೆ.

    • ನಿಮ್ಮ ಬಗ್ಗೆ ನೀವೇ ವ್ಯಕ್ತಪಡಿಸಿ

      ಅದನ್ನು ಸ್ಟಿಕ್ಕರ್‌ಗಳು, ವಾಯ್ಸ್, GIFಗಳು ಮತ್ತು ಹೆಚ್ಚಿನವುಗಳೊಂದಿಗೆ ತಿಳಿಸಿ.

    • WhatsApp Business

      ಎಲ್ಲಿಂದಲಾದರೂ ನಿಮ್ಮ ಗ್ರಾಹಕರನ್ನು ತಲುಪಿ.

  • ಗೌಪ್ಯತೆ
  • ಸಹಾಯ ಕೇಂದ್ರ
  • ಬ್ಲಾಗ್
WhatsApp Webಡೌನ್‌ಲೋಡ್
WhatsApp ಬ್ಲಾಗ್

ನಮ್ಮ ಇತ್ತೀಚಿನ ಅಪ್‌ಡೇಟ್‌ಗೆ ಇನ್ನಷ್ಟು ಸಮಯ ನೀಡುತ್ತಿದ್ದೇವೆ

ನಮ್ಮ ಇತ್ತೀಚಿನ ಅಪ್‌ಡೇಟ್‌ ಕುರಿತು ಬಹಳ ಗೊಂದಲಗಳಿವೆ ಎಂದು ತುಂಬಾ ಜನರು ನಮಗೆ ಹೇಳಿದ್ದಾರೆ. ಹಲವು ತಪ್ಪು ಮಾಹಿತಿಯು ಕಳವಳಕ್ಕೆ ಕಾರಣವಾಗಿದೆ ಹಾಗೂ ನಮ್ಮ ತತ್ವಗಳು ಮತ್ತು ವಾಸ್ತವಾಂಶಗಳನ್ನು ಅರ್ಥಮಾಡಿಕೊಳ್ಳಲು ಪ್ರತಿಯೊಬ್ಬರಿಗೂ ನಾವು ಸಹಾಯ ಮಾಡಲು ಬಯಸುತ್ತೇವೆ.

ಒಂದು ಸರಳ ಪರಿಕಲ್ಪನೆಯನ್ನು ಆಧರಿಸಿ WhatsApp ರೂಪಿಸಲಾಗಿದೆ: ನಿಮ್ಮ ಸ್ನೇಹಿತರು, ಕುಟುಂಬ ಸದಸ್ಯರ ಜೊತೆ ಶೇರ್ ಮಾಡಿಕೊಳ್ಳುವ ಎಲ್ಲವೂ ನಿಮ್ಮ ನಡುವೆಯೇ ಇರುತ್ತದೆ. ಅಂದರೆ, ನಿಮ್ಮ ವೈಯಕ್ತಿಕ ಸಂಭಾಷಣೆಗಳನ್ನು ನಾವು ಯಾವಾಗಲೂ ಆರಂಭದಿಂದ ಕೊನೆಯವರೆಗೆ ಎನ್‌ಕ್ರಿಪ್ಷನ್‌ನಿಂದ ಸುರಕ್ಷಿತಗೊಳಿಸುತ್ತೇವೆ. ಹೀಗಾಗಿ, ಈ ಖಾಸಗಿ ಮೆಸೇಜ್‌ಗಳನ್ನು WhatsApp ಆಗಲೀ ಅಥವಾ Facebook ಆಗಲೀ ನೋಡಲು ಸಾಧ್ಯವಿಲ್ಲ. ಅದಕ್ಕಾಗಿಯೇ ಮೆಸೇಜ್‌ ವಿನಿಮಯ ಮಾಡುವ ಅಥವಾ ಕರೆ ಮಾಡುವ ಯಾರ ವಿವರಗಳನ್ನೂ ನಾವು ಹೊಂದಿರುವುದಿಲ್ಲ. ನೀವು ಶೇರ್ ಮಾಡಿದ ಲೊಕೇಶನ್‌ಗಳನ್ನು ನಾವು ನೋಡಲು ಸಾಧ್ಯವಿಲ್ಲ ಮತ್ತು ನಿಮ್ಮ ಕಾಂಟ್ಯಾಕ್ಟ್‌ಗಳನ್ನು Facebook ಜೊತೆ ನಾವು ಶೇರ್ ಮಾಡುವುದಿಲ್ಲ.

ಈ ಅಪ್‌ಡೇಟ್‌ಗಳಿಂದ ಬೇರೆ ಯಾವುದೂ ಸಹ ಬದಲಾಗುತ್ತಿಲ್ಲ. ಬದಲಿಗೆ, ಈ ಅಪ್‍ಡೇಟ್‌ನಲ್ಲಿ WhatsApp ಮೂಲಕ ಬ್ಯುಸಿನೆಸ್‌ ಮೆಸೇಜ್‌ ಮಾಡುವುದಕ್ಕೆ ಸಂಬಂಧಿಸಿದಂತೆ ಜನರಿಗೆ ಹೊಸ ಆಯ್ಕೆಗಳು ಇವೆ ಹಾಗೂ ನಾವು ಹೇಗೆ ಡೇಟಾ ಸಂಗ್ರಹ ಮಾಡುತ್ತೇವೆ ಮತ್ತು ಬಳಕೆ ಮಾಡುತ್ತೇವೆ ಎಂಬ ಬಗ್ಗೆ ಹೆಚ್ಚಿನ ಪಾರದರ್ಶಕತೆಯನ್ನು ಒದಗಿಸುತ್ತದೆ. ಇಂದು ಎಲ್ಲರೂ WhatsApp ನಲ್ಲಿ ಬ್ಯುಸಿನೆಸ್‌ ಜೊತೆಗೆ ಶಾಪಿಂಗ್ ಮಾಡುತ್ತಿಲ್ಲ. ಆದರೆ, ಮುಂದಿನ ದಿನಗಳಲ್ಲಿ ಹೆಚ್ಚಿನ ಜನರು ಇದನ್ನೇ ಆಯ್ಕೆ ಮಾಡುತ್ತಾರೆ ಎಂದು ನಾವು ಭಾವಿಸಿದ್ದೇವೆ ಮತ್ತು ಇಂತಹ ಸೇವೆಗಳ ಬಗ್ಗೆ ಜನರಲ್ಲಿ ಅರಿವು ಇರಬೇಕಾದದ್ದು ಬಹಳ ಮುಖ್ಯ. Facebook ಜೊತೆ ಡೇಟಾವನ್ನು ಹಂಚಿಕೊಳ್ಳುವ ನಮ್ಮ ಸಾಮರ್ಥ್ಯವನ್ನು ಈ ಅಪ್‌ಡೇಟ್ ಹೆಚ್ಚಳ ಮಾಡುವುದಿಲ್ಲ.

ನಿಯಮಗಳನ್ನು ಪರಿಶೀಲಿಸಿ ಮತ್ತು ಒಪ್ಪಿಕೊಳ್ಳಿ ಎಂದು ಜನರಿಗೆ ಸೂಚನೆ ನೀಡಿದ ದಿನಾಂಕವನ್ನು ನಾವು ಈಗ ಮುಂದೂಡುತ್ತಿದ್ದೇವೆ. ಫೆಬ್ರವರಿ 8 ರಂದು ಯಾರ ಖಾತೆಯನ್ನೂ ಅಮಾನತುಗೊಳಿಸುವುದಿಲ್ಲ ಅಥವಾ ಅಳಿಸುವುದಿಲ್ಲ. WhatsApp ನಲ್ಲಿನ ಗೌಪ್ಯತೆ ಮತ್ತು ಸುರಕ್ಷತೆಯು ಹೇಗೆ ಕೆಲಸಮಾಡುತ್ತದೆ ಎಂಬುದರ ಕುರಿತಾದ ತಪ್ಪು ಮಾಹಿತಿಯನ್ನು ಸ್ಪಷ್ಟಪಡಿಸಲು ಇನ್ನಷ್ಟು ಕೆಲಸ ಮಾಡಲಿದ್ದೇವೆ. ಆ ಬಳಿಕ ನಾವು, ಮೇ 15 ರಂದು ಹೊಸ ಆಯ್ಕೆಗಳು ಲಭ್ಯವಾಗುವುದಕ್ಕೂ ಮೊದಲು, ಹಂತಹಂತವಾಗಿ ಗ್ರಾಹಕರು ಬಯಸಿದ ವೇಗದಲ್ಲಿ ನೀತಿಯ ಪರಿಶೀಲನೆ ಮಾಡುವಂತೆ ಜನರಿಗೆ ಅವಕಾಶ ಮಾಡಿಕೊಡುತ್ತೇವೆ.

WhatsApp ಪ್ರಪಂಚದಾದ್ಯಂತ ಆರಂಭದಿಂದ ಕೊನೆಯವರೆಗಿನ ಎನ್ಕ್ರಿಪ್ಷನ್ ಅನ್ನು ಪರಿಚಯಿಸಲು ಸಹಾಯಮಾಡಿದೆ ಹಾಗೂ ಪ್ರಸ್ತುತ ಮತ್ತು ಭವಿಷ್ಯದಲ್ಲಿ ಈ ಸುರಕ್ಷತಾ ತಂತ್ರಜ್ಞಾನವನ್ನು ಸಮರ್ಥಿಸಿಕೊಳ್ಳಲು ನಾವು ಬದ್ಧರಾಗಿದ್ದೇವೆ. ನಮ್ಮನ್ನು ಬೆಂಬಲಿಸಿದ ಪ್ರತಿಯೊಬ್ಬರಿಗೂ ಮತ್ತು ವಾಸ್ತವಾಂಶಗಳನ್ನು ತಿಳಿಸಲು ನೆರವಾದ ಹಾಗೂ ವದಂತಿ ಹರಡುವುದನ್ನು ನಿಲ್ಲಿಸಲು ಸಹಾಯಮಾಡಿದ ಪ್ರತಿಯೊಬ್ಬರಿಗೂ ಧನ್ಯವಾದಗಳು. ಖಾಸಗಿಯಾಗಿ ಸಂವಹನ ನಡೆಸಲು WhatsApp ಅನ್ನು ಅತ್ಯುತ್ತಮ ವಿಧಾನವನ್ನಾಗಿ ಮಾಡಲು ನಾವು ಸತತವಾಗಿ ಪ್ರಯತ್ನಿಸುತ್ತಿರುತ್ತೇವೆ.

ಜನವರಿ 15, 2021

ಟ್ವೀಟ್ಹಂಚಿಕೊಳ್ಳಿ
ಡೌನ್‌ಲೋಡ್
WhatsApp ಪ್ರಮುಖ ಲೋಗೋ
WhatsApp ಪ್ರಮುಖ ಲೋಗೋಡೌನ್‌ಲೋಡ್
ನಾವು ಏನು ಮಾಡುತ್ತೇವೆಫೀಚರ್‌ಗಳುಬ್ಲಾಗ್ಸ್ಟೋರೀಸ್ವ್ಯವಹಾರಕ್ಕಾಗಿ
ನಾವು ಯಾರುನಮ್ಮ ಬಗ್ಗೆವೃತ್ತಿಜೀವನಗಳುಬ್ರ್ಯಾಂಡ್ ಕೇಂದ್ರಗೌಪ್ಯತೆ
WhatsApp ಬಳಸಿAndroidiPhoneMac/PCWhatsapp Web
ಸಹಾಯದ ಅಗತ್ಯವಿದೆಯೇ?ನಮ್ಮನ್ನು ಸಂಪರ್ಕಿಸಿಸಹಾಯ ಕೇಂದ್ರಕೊರೊನಾವೈರಸ್
ಡೌನ್‌ಲೋಡ್

2023 © WhatsApp LLC

ಸೇವಾ ನಿಯಮಗಳು